Wednesday, October 31, 2012

Kannada Rajyotsavada Shubhashaya




 ಹೀ ಕನ್ನಡ ರಾಜ್ಯೋಸ್ತವದ ದಿನ. 
ನಿಮ್ ಹೆಲ್ರಿಗೂ ನಾನ್ ಹೇನ್ ಏಳ್ಬೇಕು ಹಂತ ಹಂಕಂಡಿದಿನಿ ಹಂದ್ರೆ ...

ನಮ್ಹೀ ನಾಡನ್ನ .. ಕಟ್ಟಕ್ಕೆ ಬಾಳ ಜನ ಸ್ರಮ ಪಟ್ಟವ್ರೆ !
ಹವರ ಸ್ರಮ .. ಯರ್ಥ ಹಾಗ್ಬಾರ್ದಂಗೆ ನೋಡ್ಕಮೋದು ನಮ್ ಜಬಾದಾರಿ!
ಬೇರೆ ಬಾಷೆವ್ರು ಬಂದು ನಮ್ ನಾಡಲ್ಲಿ ಹಾಡಿದ್ದೆ ಹಾಟ ಹನ್ಕೊನ್ಬುಟ್ಟವ್ರೆ ..
ಹವ್ರಿಗೆಲ್ಲ ಪಾಠ ಕಲ್ಸ್ಬೇಕು ಹಂದ್ರೆ ಮೊದ್ಲು ನಮ್ ಹೈಕ್ಳಿಗೆ ಬುದ್ದಿ ಏಳ್ಬೇಕು!!

ನಮ್ ನಾಡಂದ್ರೆ ಏನು ... ?  ನಮ್ ಸಂಸ್ಕೃತಿ ಹೆಂತದು.. ?
ಇದೆಲ್ಲ ನಾವ್ ನಮ್ ಮಕ್ಳಿಗೆ ಯೋಳ್ದಿದ್ರೆ ಇನ್ನ್ಯಾರ್ ಹೇಳ್ಕೊತ್ತಾರೆ??

ಕುಯಂಪು , ಬೇಂದ್ರೆ ಅವ್ರೆಲ್ಲಾ ಯಾರು ಅಂತಾನು ಈಗಿನ್ ಕಾಲದ್ ಪ್ಯಾಸನ್ ಮುಂಡೆವುಕ್ಕೆ ಗೊತ್ತಿರಕಿಲ್ಲ..
ಈ ಕರ್ನಾಟಕ ಹೊಂದು  ಅಂತ ಹಾಗಕ್ಕೆ .. ಎಸ್ಟ್ ಜನ ತ್ಯಾಗ ಮಾಡವ್ರೆ.. ಎಸ್ಟ್ಜನ ವೋರಾಟ ಮಾಡವ್ರೆ..
ಇದೆಲ್ಲ ನಮ್ಮಕ್ಳಿಗೆ ಏನು ಗೊತ್ತಿಲ್ಲ.. ಯಾಕಂದ್ರೆ ನಾವು ಏಳ್ಕೋಟಿಲ್ಲ...

ಹದ್ಕೆ ನಾನ್ ಯೋನ್ ಯೋಳ್ತಿನಪ್ಪ ಹಂದ್ರೆ... ನಿಮ್ ನಿಮ್ ಮನೆನಾಗೆ ಕನ್ನಡನೇ ಮಾತಾಡಿ..

ಕೊನೆ ಪಕ್ಸ.. ಕನ್ನಡದೋರ್ ಜೊತ್ಯಾದ್ರು ಕನ್ನಡದಾಗ್ ಮಾತಾಡಿ..
ಹಿನ್ನೊಂದ್ ಇಸ್ಯ...

ನನ್ ಕನ್ನಡ ಹುಚ್ಚಾರ ಸರಿ ಹಿಲ್ದೆ ವೋದ್ರು..
ನಾನ್ ಕನ್ನಡದಾಗ್ ಮಾತಾಡ್ತೀನಿ....

ಯಾಕಂದ್ರೆ .. ನಾನು ಹುಚ್ಚಾರಕ್ಕಿಂತ  ಇಚಾರಕ್ಕೆ ಬೆಲೆ ಕೊಡೊ ಮನ್ಸ!!

ಮುಗ್ಸೋ ಮುಂಚೆ ಮತ್ತೆ ಎಲ್ರಿಗೂ... ಕನ್ನಡ ರಾಜ್ಯೋಸ್ತವದ ಸುಬಾಸಯ..
ಜೈ ಕನ್ನಡಾಂಬೆ!!
ಜೈ ಕರ್ನಾಟಕ!!

-      ಸುಪ್ರೀತ್



No comments: